ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರಂಗ ಮಿತ್ರ ಮಂಡಳಿಯ ಅಧ್ಯಕ್ಷರಾದ ಶ್ರೀ ಗಣೇಶ ನಾಯ್ಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭೆಯ ನಿಕಟಪೂರ್ವ ಮುಖ್ಯಾಧಿಕಾರಿ ಶ್ರೀಯುತ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ ವಿದ್ಯಾರಂಗ ಮಿತ್ರ ಮಂಡಳಿಯ ಸ್ಥಾಪಕರ ಬಗ್ಗೆ ಅವರ ಮುಂದಾಲೋಚನೆಯು ಇಂದು ಸಾಕಾರಗೊಂಡಿದೆ ಎಂದರೆ ತಪ್ಪಾಗಲಾರದು.ಖಾರ್ವಿ ಸಮಾಜದ ಧೈರ್ಯ ಸಾಹಸಕ್ಕೆ ಹೆಸರುವಾಸಿಯಾದವರು ಹಾಗೆಯೇ ನಂಬಿಕೆ ವಿಶ್ವಾಸಕ್ಕೆ ಅರ್ಹರು ಎಂದು ಹೇಳಿದರು.ಕಾವೇರಿ ಎಸೋಸಿಯೇಟ್ಸ್ ನಾ ಮಾಲಕರಾದ ಶ್ರೀಯುತ ಕೆ.ರವೀಂದ್ರರವರು ನಾನು ಹುಟ್ಟಿದ ಪರಿಸರದ 53 ವರ್ಷದ ವಾರ್ಷಿಕ ಹಬ್ಬ ಆಚರಣೆ ಮಾಡುತ್ತಿರುವ ಸಂಸ್ಥೆಯ ಒಂದು ವೇದಿಕೆಯಲ್ಲಿ ಭಾಗಿಯಾಗಿರುವುದು ತುಂಬಾ ಸಂತೋಷ ಕೊಡುವಂತದ್ದು ವಿಧ್ಯಾರ್ಥಿ ವೇತನಕ್ಕೆ ತಮ್ಮ ದೇಣಿಗೆಯನ್ನು ನೀಡಿ ಶುಭ ಹಾರೈಸಿದರು. ಇನ್ನೊರ್ವ ಅತಿಥಿ ಶ್ರೀಯುತ ಜಯಶೀಲ ಶೆಟ್ಟಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ರಾಜ್ಯ ಪರಿಷತ್ ಸದಸ್ಯರು ಬದಲಾದ ಶಿಕ್ಷಣ ವ್ಯವಸ್ಥೆಯ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವಂತಾಗಲು ಇಂತಹ *ಸಂಸ್ಥೆಯು ನೀಡುವ ಶಿಬಿರಗಳಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಇದೆ ಎಂದರು. ANZ BANK ನಾ ಉದ್ಯೋಗಿ ಸೀನಿಯರ್ ಸಾಫ್ಟ್ ಇಂಜಿನಿಯರ್ ಶ್ರೀಮತಿ ಸೌಮ್ಯ ಖಾರ್ವಿ ಮಾತಾಡಿ ನಾನು ನನ್ನ ಬಾಲ್ಯದ ಶಾಲಾ ದಿನಗಳಲ್ಲಿ ಸಂಸ್ಥೆಯ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಮತ್ತು ವಿದ್ಯಾರ್ಥಿ ವೇತನ ಪಡೆಯುತ್ತಿದ್ದು ಇಂದು ನನಗೆ ಕರೆದು ಗುರುತಿಸಿದಕ್ಕೆ ನಾನು ನನ್ನ ಸಮಾಜಕ್ಕೆ ಆಭಾರಿಯಾಗಿದ್ದೇನೆ ಹಾಗೂ ವಿದ್ಯಾನಿಧಿ ಯೋಜನೆಗೆ 25000/-ಸಾವಿರ ದೇಣಿಗೆ ನೀಡಿದರು. ಕುಂದಾಪುರ ಆಹಾರ ನಿರೀಕ್ಷಕರಾದ ಶ್ರೀ ಎಚ್.ಎಸ್.ಸುರೇಶ್ ರವರು ಉಪಸ್ಥಿತರಿದ್ದರು. ಜೀವರಕ್ಷಕ ಮುಳುಗು ತಜ್ಞ ಗಂಗೊಳ್ಳಿಯ ಶ್ರೀಯುತ ದಿನೇಶ್ ಖಾರ್ವಿಯವರನ್ನು ಸನ್ಮಾನಿಸಲಾಯಿತು. ಕೊಂಕಣಿ ಖಾರ್ವಿ ಸಮಾಜದ 132 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು ಆಟೋಟ ಸ್ಪರ್ಧೆ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರೀ ಮುಕುಂದ ಖಾರ್ವಿ ಪ್ರಾರ್ಥಿಸಿ, ವಿದ್ಯಾನಿಧಿ ಯೋಜನೆಯ ಅಧ್ಯಕ್ಷರಾದ ಶ್ರೀ ದಿನಕರ ಖಾರ್ವಿ ಸ್ವಾಗತಿಸಿದರು ಸಂಸ್ಥೆಯ ಕಾರ್ಯದರ್ಶಿ ಶ್ರೀ ನಾಮದೇವ ಖಾರ್ವಿ ವರದಿ ವಾಚಿಸಿದರು ಸೌಮ್ಯ S.ಖಾರ್ವಿ ಕಾರ್ಯಕ್ರಮ ನಿರೂಪಿಸಿದರು ಶ್ರೀ. ಸತೀಶ್ S.ಖಾರ್ವಿ ವಂದಿಸಿದರು. ಪ್ರೇಂಡ್ಸ್ ಮೆಲೋಡಿಸ್, ಉಡುಪಿ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.