ಖಾರ್ವಿ ಸಮಾಜದ ಹೆಮ್ಮೆ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿ ನವೀಕೃತ ಶಿಲಾಮಯ ದೇಗುಲ ಲೋಕಾರ್ಪಣೆ ಮತ್ತು ಬ್ರಹ್ಮ ಕಲಶೋತ್ಸವವು ದಿ.20.01.2023 ರಿಂದ 28.01.2022 ರವರೆಗೆ ಜರುಗಲಿದೆ. ನಮ್ಮ ಕಾಲಘಟ್ಟದಲ್ಲಿ ಇತಿಹಾಸ ಪ್ರಸಿದ್ಧ ಇಂತಹ ಒಂದು ದೇವಸ್ಥಾನ ಅನಾವರಣಗೊಳ್ಳುವುದು ನಮ್ಮೆಲ್ಲರ ಪುಣ್ಯವೇ ಸರಿ. ಈ ಅದೃಷ್ಟದ ಘಳಿಗೆ ಎಲ್ಲರಿಗೂ ಸಿಗುವುದಿಲ್ಲ. ಎಲ್ಲಾ ಭಕ್ತಾದಿಗಳಲ್ಲಿ ನಮ್ಮದೊಂದು ಚಿಕ್ಕ ಮನವಿ ಈ ಒಂದು ಪುಣ್ಯ ಕಾರ್ಯಕ್ರಮದಲ್ಲಿ ತಾವು ತಮ್ಮ ಕುಟುಂಬ ಸಹಿತವಾಗಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ ದೇವಸ್ಥಾನದ ಕಮಿಟಿಯವರು ತಮ್ಮೆಲ್ಲರ ಮನೆ ಮನೆಗೆ ಬಂದು ಆಮಂತ್ರಣ ಪತ್ರಿಕೆ ನೀಡುವ ಕಾರ್ಯಕ್ರಮ ಶೀಘ್ರದಲ್ಲೇ ನಡೆಯಲಿದೆ. ಭಕ್ತಾಧಿಗಳು ತನು ಮನ ಧನದಿಂದ ಭಕ್ತಿ ಪೂರ್ವಕವಾಗಿ ಸಹಕರಿಸಬೇಕಾಗಿ ಕಳಕಳಿಯಿಂದ ಬೇಡಿಕೊಳ್ಳುತ್ತೇವೆ. ಬ್ಯಾಂಕ್ ಮೂಲಕ ದೇವಸ್ಥಾನಕ್ಕೆ ಹಣಪಾವತಿ ಮಾಡುವವರು ಆಮಂತ್ರಣ ಪತ್ರಿಕೆಯಲ್ಲಿ ಬ್ಯಾಂಕ್ ಮಾಹಿತಿ ಹಾಗೂ ಕ್ಯೂಆರ್ ಕೋಡ್ ನಮೂದಿಸಿರುತ್ತೇವೆ ದಯವಿಟ್ಟು ನೇರವಾಗಿ ಬ್ಯಾಂಕಿಗೆ ಜಮಾ ಮಾಡಬಹುದು ಹಾಗೂ ಅದರ ರಸೀದಿಯನ್ನು ಕಮಿಟಿಯವರ ಮೊಬೈಲ್ ನಂಬರ್ ಗೆ ಕಳುಹಿಸಬೇಕಾಗಿಸ ವಿನಂತಿಸಿಕೊಳ್ಳುತ್ತೇವೆ. ಧನ್ಯವಾದಗಳೊಂದಿಗೆ, ಜೀರ್ಣೋದ್ಧಾರ ಸಮಿತಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿ.