Karnataka Assembly Election 2023: ಚುನಾವಣೆ ಘೋಷಣೆಯಾದಾಗಿನಿಂದ ಇಡೀ ರಾಷ್ಟ್ರದ ಚಿತ್ತ ಕರ್ನಾಟಕದತ್ತ ನೆಟ್ಟಿದೆ. ಮುಂದಿನ ಲೋಕಸಭಾ ಚುನಾವಣೆಗೆ ನಾಂದಿ ಹಾಡಲಿದೆ ಎನ್ನಲಾಗುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಎಲ್ಲರನ್ನೂ ಕುತೂಹಲದಿಂದ ರಾಜ್ಯದಂತೆ ನೋಡುವಂತೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಪ್ರತಿದಿನ ನಡೆಯುವ ರಾಜಕೀಯ ಘಟನಾವಳಿಗಳ ಸಂಕ್ಷಿಪ್ತ ವಿವರವನ್ನು ನ್ಯೂಸ್ 18 ಕನ್ನಡ ಓದುಗರಿಗೆ ಇಲ್ಲಿ ಕೊಡಲಾಗಿದೆ ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ (Karnataka Election 2023) ಮತದಾನಕ್ಕೆ ಕೌಂಟ್‌ಡೌನ್ ಶುರುವಾಗುತ್ತಿದೆ. ಚುನಾವಣೆಗೆ ಬರೀ ನಾಲ್ಕು ದಿನ ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಅಬ್ಬರದ ಸ್ವರೂಪ ಪಡೆಯುತ್ತಿದೆ. ಕೊನೇ ಕ್ಷಣದಲ್ಲಿ ಮತದಾರರನ್ನು ಹೇಗೆಲ್ಲ ಓಲೈಸಬಹುದು ಅನ್ನೋದರ ಬಗ್ಗೆ ಪ್ಲಾನ್ ಮೇಲೆ ಪ್ಲಾನ್ ಮಾಡ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಪ್ರತಿ ದಿನ ಚುನಾವಣೆಗೆ ಸಂಬಂಧಿಸಿದಂತೆ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ ಅನ್ನೋದರ ಲೈವ್ ಅಪ್‌ಡೇಟ್ಸ್ ಇಲ್ಲಿದೆ.