ಇತರ ಜಿಲ್ಲೆಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆ ಯಲ್ಲಿ ಸಮತಟ್ಟಾದ ಮರಳು ತೀರ ಕಡಿಮೆ ಪ್ರಮಾಣದಲ್ಲಿದೆ. ಇದಕ್ಕೆ ಕಾರಣ ಪಶ್ಚಿಮ ಘಟ್ಟಗಳು ತೀರಪ್ರದೇಶಗಳನ್ನು ಆವರಿಸಿಕೊಂಡಿರುವುದು. ಮಳೆಗಾಲದಲ್ಲಿ ಅತ್ಯಂತ ವೇಗವಾಗಿ ಹರಿದು ಸಮುದ್ರ ಸೇರುವ ಜಿಲ್ಲೆಯ ನದಿಗಳು ಸಂಗಮ ಪ್ರದೇಶಗಳು ಸಮುದ್ರ ಕೊರೆತದ ಅನಾಹುತಗಳಿಗೆ ಒಳಪಟ್ಟಿದೆ. ವಾಸಕ್ಕೆ ಯೋಗ್ಯವಾದ ಪ್ರದೇಶಗಳ ಕೊರತೆ ಸದಾ ಮೀನುಗಾರರಲ್ಲಿ ನೆಲೆಯಾಗಿದೆ. ಭೂ ಮಾಲಿಕತ್ವ ಎನ್ನುವ ಪದ ಮೀನುಗಾರರನ್ನು ಸದಾ ಕಾಡುವ ಸಮಸ್ಯೆ. ಇದ್ದ ಭೂಮಿಗಳನ್ನು ದೇಶ ಅಭಿವೃದ್ಧಿಯಾಗಲು ನೌಕಾ ನೆಲೆ, ಬಂದರೂಗಳಿಗೆ, ಬಿಟ್ಟು ಕೊಟ್ಟು ಚಿಕ್ಕಚಿಕ್ಕ ಮನೆಗಳಲ್ಲಿ ವಾಸಿಸುತ್ತಿದ್ದರೂ ಅದನ್ನು ಕಸಿಯಲು ಬರುವ ಬಂಡವಾಳಶಾಹಿಗಳಿಂದ ತಮ್ಮ ನೆಲೆಗಳನ್ನು ರಕ್ಷಿಸಿಕೊಳ್ಳುವದೇ ದೊಡ್ಡ ಸಮಸ್ಯೆಯಾಗಿದೆ. ಓಂದದೆ ವಾಣಿಜ್ಯ ಬಂದರೂ ವಿಸ್ತರಣೆಯ ಯೋಜನೆಗಳು, ಉದ್ದೇಶಿತ ಹೊಸ ಬಂದರೂಗಳು, ಕರಾವಳಿ ಪ್ರವಾಸೋಧ್ಯಮಗಳು ಮೀನುಗಾರ ಮತ್ತು ಕಡಲತೀರಗಳ ಪಾರಂಪರಿಕ ಬೆಸುಗೆಯನ್ನು ಕಳಚುತ್ತಿದೆ. ಜೀವನಾಂಶದ ಸೇವೆ, ಪೌಷ್ಠಿಕ ಆಹಾರದ ಮೂಲವಾದ ಮೀನುಗಾರಿಕೆ ಉದ್ಯಮವಾಗಿ ಮಾರ್ಪಾಡಾಗಿ ಯಾಂತ್ರಿಕೃತೆಯ ಒತ್ತಡದಲ್ಲಿ ಸಾಂಪ್ರದಾಯಿಕ ಮೀನುಗಾರಿಕಾ ವಿಧಾನಗಳು ಅವನತಿ ಹೊಂದುತ್ತಿದೆ. ಯಾಂತ್ರಿಕತೆಯಲ್ಲಿ ಸಿಕ್ಕಿ ಬಳಲಿ ಬಲೆಗೆ ಮೀನು ಸಿಗದೆ ಕಾರ್ಮಿಕರಾಗಿ ದೊಡ್ಡ ಬೋಟನಲ್ಲಿ ದೂರದ ಗೋವಾ, ಮಲ್ಪೆ, ಮಂಗಳೂರು, ರತ್ನಾಗಿರಿ ಇಂತಹ ಊರುಗಳಿಗೆ ಮನೆಮಠ, ವಯೋವೃದ್ಧ ತಂದೆ ತಾಯಿ, ಹೆಂಡತಿ ಮಕ್ಕಳನ್ನು ಬಿಟ್ಟು ಕೆಲಸ ಹುಡುಕಿ ಹೋಗುವುದು ಇಂದಿನ ದಿನಗಳಲ್ಲಿ ಯುವ ಮೀನುಗಾರನಿಗೆ ಸಿಕ್ಕ ಕೊಡುಗೆಯಾಗಿದೆ. ಆಧುನಿಕ ಮತ್ತು ಗುಣಮಟ್ಟದ ಕೌಸಲ್ಯಗಳು ಮೀನುಗಾರಿಕಾ ಉದ್ಯಮದಲ್ಲಿ ಸ್ಥಳೀಯವಾಗಿ ವಿವಿಧ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಅವಕಾಶಗಳಿದ್ದರೂ ಮೀನುಗಾರಿಕಾ ಶಿಕ್ಷಣದ ಕೊರತೆ ಜಿಲ್ಲೆಯಲ್ಲಿ ಕಾಣುತ್ತಿದೆ ಮೀನುಗಾರಿಕೆ ಸಂಬಂಧಿಸಿದ ಕಾಲೇಜುಗಳೇ ಇಲ್ಲದ ಜಿಲ್ಲೆ ಅನ್ನುವದು ಓಂದಡೆಯಾದರೆ ಬಂದರೂ ವ್ಯವಹಾರಗಳ ಶಿಕ್ಷಣ ದೂರದ ಮಾತಾಗಿದೆ. ಸಮುದ್ರ ವ್ಯವಹಾರಗಳು ಗಗನ ಕುಸುಮಗಳಾಗಿದೆ. ಮೀನುಗಾರರಿಗೆ ಸರಕಾರ ನೀಡಿದ ಯೋಜನೆಗಳು ಹಲವು ಇದ್ದರೂ ಜಿಲ್ಲೆಯ ಮೀನುಗಾರರ ಕೈಗೆ ಎಟಕುವದು ಯಾವುದು ಇಲ್ಲ ಸಿಕ್ಕರೂ ನೂರು ರೂಪಾಯಿಗೆ ಒಂದು ರೂಪಾಯಿ ಬರುವಾಗಲೆ ಸೂರುತ್ತಾ ಬರುವ ಸೌಲಭ್ಯಗಳು ಪರ್ಶೆಂಟೆಜ್ / ಕಮಿಷನ್ ಹಾವಳಿಯಲ್ಲಿ ಸಿಕ್ಕಿ ಖಾಲಿ ಚೊಂಬು ಆಗುತ್ತಿರುವದೇ ದೊಡ್ಡ ದುರಂತವೆಂದರೆ ತಪ್ಪಾಗಲಾರದು. ಮೀನುಗಾರರು ಎಂದರೆ ಒಂದೇ ತಕ್ಕಡಿಯಲ್ಲಿ ತೂಗುವ ಅಧಿಕಾರಿಗಳಿಗೆ ಸಾಂಪ್ರದಾಯಿಕ ಮೀನುಗಾರರ ಬಗ್ಗೆ ಅಸಡ್ಡೆ, ಮೀನುಗಾರ ಮಹಿಳೆಯರ ಸಂಕಷ್ಟಗಳನ್ನು ಕೇಳುವರೆ ಇಲ್ಲಾ ಕೇಂದ್ರದಿಂದ ಬಂದ ಮೀನುಗಾರಿಕಾ ರೈತ ಉತ್ಪಾದಕ ಗುಂಪುಗಳ ಸೌಲಭ್ಯ ನೀಡಲು ಸ್ಥಳೀಯ ರಾಜಕೀಯ, ವರ್ಷದ ಒಂದು ದಿನವೂ ಮೀನುಗಾರಿಕೆಗೆ ತೆರಳದ ವ್ಯಕ್ತಿಗಳೆ ಜಿಲ್ಲೆಯ ಮೀನುಗಾರ ಮುಖಂಡರುಗಳು ಇವರುಗಳ ರಾಜಕೀಯ ಬಣಗಳ ತಿಕ್ಕಾಟ ಆರೋಪ, ಕೆಸರಾಟಗಳಲ್ಲಿ ಸಾಮಾನ್ಯ ಮೀನುಗಾರ ಅತಂತ್ರನಾಗಿದ್ದಾನೆ ಅವನ ನೈಜ ಸಮಸ್ಯೆಗಳು ಗಾಳಿ ಮಾತಾಗಿದೆ. ಮೀನುಗಾರಿಕೆಯಲ್ಲಿ ವೈವಿಧ್ಯತೆ ಇದೆ ವಿವಿಧ ರೀತಿಯ ಬಲೆಗಳು, ದೋಣಿಗಳು, ಮೀನುಗಾರಿಕಾ ವಿಧಾನಗಳು, ಮೀನುಗಾರಿಕೆಗೆ ಯೋಗ್ಯವಾದ ಪ್ರದೇಶಗಳು, ಮೀನು ಓಣಗಿಸುವ ಪ್ರದೇಶಗಳು, ಉಪಕಸಬುಗಳು ಎಲ್ಲವನ್ನು ಒಂದೇ ತಟ್ಟೆಯಲ್ಲಿಟ್ಟು ತೋರಿಸಿ ಮೀನುಗಾರಿಕಾ ಕಾನೂನುಗಳನ್ನು ರಚಿಸಲಾಗಿದೆ. ಹಿಂದಿನಿಂದಲು ಮೀನುಗಾರಿಕಾ ಉದ್ಯಮ ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆಯಾಗಿದ್ದರೂ ಮೀನು ಮಾರುಕಟ್ಟೆಗಳಲ್ಲಿ, ಮೀನುಗಾರಿಕಾ ಬಂದರುಗಳಲ್ಲಿ ಮಹಿಳಾ ಶೌಚಾಲಯ/ಸವಲತ್ತು / ಸೌಲಭ್ಯದ ಕೊರತೆ, ಮೀನು ಓಣಗಿಸುವ ಮಹಿಳೆರಿಗಂತೂ ಕಷ್ಟದ ಮೇಲೆ ಕಷ್ಟ ಜಿಲ್ಲೆಯಲ್ಲಿ ಒಂದು ಓಣ ಮೀನು ಮಾರುಕಟ್ಟೆಗಳಿಲ್ಲ ರಸ್ತೆಯ ಬದಿಯೇ ಮಾರುಕಟ್ಟೆ, ಮೀನು ಓಣಗಿಸುವ ಪ್ರದೇಶಗಳನ್ನು ಕಸಿದುಕೊಳ್ಳುವ ಹುನ್ನಾರಗಳು, ಓಣಗಿಸಲು ಇಟ್ಟಿದ್ದ ಮೀನುಗಳ ಮೇಲೆ ರಸ್ತೆಯ ನೆಪದಲ್ಲಿ ಕೆಂಪು ಮಣ್ಣು ದೂಳಿ ಚೆಲ್ಲುವ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಕೋವಿಡ ಸಾಂಕ್ರಮಿಕ ಸಂಧರ್ಭದಲ್ಲಿ ಯಾವುದೇ ರೀತಿಯ ಹೆಚ್ಚಿನ ತೊಂದರೆಗೆ ಸಿಲುಕದ ಉದ್ಯಮ ಅಂದರೆ ಅದು ಮೀನುಗಾರಿಕೆ, ಮೀನು ಒಂದು ಪೌಷ್ಠಿಕ ಆಹಾರ ಜಗತ್ತಿನ ಸರಾಸರಿ ಪೌಷ್ಟಿಕ ಕೊರತೇ ಯ ದೇಶಗಳಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಇದನ್ನು ನಿರ್ಣಾಯಕವಾಗಿ ತಡೆಯುವ ಶಕ್ತಿ ಮೀನುಗಾರಿಕಾ ಉದ್ಯಮದಲ್ಲಿದೆ. ಮೀನು ಹಿಡಿಯುವ ಮೀನುಗಾರರ ಕಿಂತ ಮೀನು ತಿನ್ನುವ ಜನರ ಸಂಖ್ಯೆ ಹೆಚ್ಚು. ಸದೃಡ ದೇಶಕ್ಕೆ ಆರೋಗ್ಯವಂತ ಪ್ರಜೆ ಗಳ ಅವಶ್ಯಕತೆ ಅತಿ ಮುಖ್ಯ. ಪೌಷ್ಠಿಕ ಆಹಾರ ವನ್ನು ಜನಸಾಮಾನ್ಯರಿಂದ ಹಿಡಿದು ಶ್ರೀಮಂತರಿಗೂ ಓದಗಿಸುವ ಮೀನುಗಾರರ ಜೀವನ ದಿನನಿತ್ಯ ಅಲೆಗಳ ಜೊತೆ ಹೋರಾಟದ ಬದುಕು, ಮೀನುಗಾರಿಕೆ ಪ್ರದೇಶಗಳನ್ನು ಹಾಗೂ ಉದ್ಯಮಕ್ಕೆ ಉಳಿಸಿ – ಬೆಳಸಿಕೊಂಡು ಹೋಗಬೇಕೆನ್ನುವ ದೇಶಾಭಿಮಾನಿಗಳ ಕೊರತೆ ಜಿಲ್ಲೆಯಲ್ಲಿದೆ. ಜಿಲ್ಲೆಯ ಕಡಲತೀರ ಭಾರತದ ಅಂತರಾಷ್ಟ್ರೀಯ ಗಡಿಗಳ ಯಾದಿಯಲ್ಲಿದೆ. ದೇಶದ ಕಡಲ ತೀರದ ಗಡಿಯ ರಕ್ಷಣೆಯೂ ಕಡಲ ತೀರ ಜನರ ಕರ್ತವ್ಯವಾಗಿದೆ ಜಲಗಡಿ ಕಾಯುವ ನೌಕಾ ಸೇನೆ ಮತ್ತು ನೌಕಾದಳ, ಕರಾವಳಿ ಪೋಲಿಸ ರವರ ಹತ್ತಿರ ಶಸ್ತ್ರಾಸ್ತ ಗಳಿದ್ದರೂ ಹೆಚ್ಚಿನ ಗಸ್ತು ಅಸಾಧ್ಯ ಇಂತಹ ಸಂದರ್ಭದಲ್ಲಿ ಸದಾ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಜಿಲ್ಲೆಯ ಸಾವಿರಾರು ದೋಣಿಗಳ ಗಸ್ತು, ಮೀನುಗಾರ ಭಾರತದ ತಟದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ ಇವರ ಬದುಕನ್ನು ಕಡೆಗಣಿಸಬಾರದು. ಜಿಲ್ಲೆಯ ಮೀನುಗಾರಿಕಾ ಪ್ರದೇಶಗಳು ಪ್ಲಾಸ್ಟಿಕ್ ಮಯವಾಗಿದೆ ಬಲೆ ಹಾಕಿದರೆ ಮೀನು ಸಿಗುವುದಕ್ಕಿಂತ ಪ್ಲಾಸ್ಟಿಕ್ ಗಳ ಸಂಖ್ಯೆ ಹೆಚ್ಚು . Blue economy ಎಂದು ಬರಿ ಆದಾಯವನ್ನೆ ಬಯಸುವರಿಗೆ ನದಿ – ಸಮುದ್ರದ ನೀರಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಇದು ಮೀನುಗಾರರಿಂದ ಮಾತ್ರ ಸಾಧ್ಯವಾಗದ ಮಾತು ಕರಾವಳಿಯ ಎಲ್ಲಾ ಸ್ಥಳೀಯ ಆಡಳಿತ ಮತ್ತು ಜನರ ಭಾಗವಹಿಸುವಿಕೆ ಅತ್ಯಗತ್ಯ. ಪ್ಲಾಸ್ಟಿಕ್ ಕಲುಸಿತ ಮುಂದುವರೆದರೆ ಮೀನು ತಿನ್ನುವರು ತಾವು ತಿನ್ನುವ ಮೀನು ಎಲ್ಲಿಂದ ಹಿಡಿದಿದ್ದು ಎನ್ನುವದನ್ನು ವಿಚಾರಣೆ ಮಾಡುವ ಕಾಲ ಬರಬಹುದು. ಜಿಲ್ಲೆಯ ಮೀನುಗಾರಿಕೆಯಲ್ಲಿ ಭವಿಷ್ಯ ಅಡಗಿದೆ ಜಿಲ್ಲೆಯ ನದಿ – ಸಮುದ್ರಗಳು ಇನ್ನೂ ಕಲುಸಿತವಾಗಿಲ್ಲ. ಆಂಗ್ಲ ಭಾಷೆಯಲ್ಲಿ Fish for all for ever ಅನ್ನುತ್ತಾರೆ Fish for livellyhood – fish for future ಅನ್ನುವದು ನಮ್ಮ ಜಿಲ್ಲೆಗೆ ಸೂಕ್ತ. ಸದ್ಯದ ವಿಧ್ಯಮಾನಗಳು ಜಿಲ್ಲೆಯ ಮೀನುಗಾರ ಸಮಾಜ ನದಿ – ಸಮುದ್ರದ ನೀರಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾನೆ ಅವನಿಗೆ ಗೊತ್ತು ಮೀನು ಇದ್ದರೆ ಮಾತ್ರ ಮೀನುಗಾರ ಇರುತ್ತಾನೆ ಅಂತ. ಆರೋಗ್ಯಕರ ವೈವಿಧ್ಯಮಯ ಮೀನುಗಳು ಜಾತಿಗಳ ಸಂತತಿ ಉಳಿಯಬೇಕಾದರೆ ನೀರಿನ ಆರೋಗ್ಯ ಮೀನುಗಳ ಆವಾಸ ಸ್ಥಾನಗಳು, ಮೀನುಗಳ ಸಂತಾನೂ ತ್ವತ್ತಿ ಪ್ರದೇಶಗಳ ರಕ್ಷಣೆ ಅತ್ಯಗತ್ಯ ಇದಕ್ಕೆ ಎಲ್ಲರ ಸಹಕಾರವೂ ಬೇಕು. ಭಾರತದ ಕಡಲತೀರ ನಿರ್ವಹಣೆಗೆ ವಿಶೇಷ ಕಾನೂನುಗಳಿವೆ 1991 ರಿಂದ CRZ ಕಾನೂನು ಎಂಬ ಹೆಸರಿನಲ್ಲಿ ಕರಾವಳಿ ರಾಜ್ಯದೆಲ್ಲಡೆ ಪ್ರಚಲಿತ ಇರುವ ಕಾನೂನು 2011 ಮತ್ತು 2019 ರಲ್ಲಿ ನವೀಕರಿಸಲಾಗಿದೆ ಕಳೆದ ದಶಕದಲ್ಲಿ 25 ಹೆಚ್ಚು ಬಾರಿ ತಿದ್ದುಪಡಿಯಾಗಿರುವ ದು ಒಂದು ದುರಂತವಾಗಿದೆ ಭಾರತದ ಕಾನೂನುಗಳಲ್ಲಿ ಅತಿ ಹೆಚ್ಚು ಬಾರಿ ತಿದ್ದುಪಡಿಯಾದ ಪರಿಸರ ಕಾನೂನು ಇದಾಗಿದೆ. ವಿಶೇಷ ವೆಂದರೆ 1991ರಲ್ಲಿ ಯಾವ ಉದ್ದೇಶ – ಗುರಿ ಯನ್ನು ಇಟ್ಟು ಕರಾವಳಿ ತೀರ ನಿರ್ವಹಣೆಯ ಸಂಕಲ್ಪ ಮಾಡಿದ್ದನ್ನು 2019 ರ ಕಾನೂನಿನಲ್ಲಿ ಸಂಪೂರ್ಣವಾಗಿ ಮಾಸಿ – ಅಳಸಿ ಸ್ವರೂಪವನ್ನೆ ಬದಲಾಯಿಸಿರುವದು ಮೀನುಗಾರರ ಮೇಲೆ ಗಧಾಪ್ರಹಾರ ಮಾಡಿದ್ದಾರೆ. ಕನಾಟಕದಲ್ಲಿ 2019 ರ ಕಡಲ ತೀರ ನಿರ್ವಹಣೆ ನಕ್ಷೆಗಳು ಕಳೆದ ತಿಂಗಳು ಬಿಡುಗಡೆ ಯಾಗಿದ್ದು ಇದರಲ್ಲಿ ಮೀನುಗಾರ ಮೀನುಗಾರಿಕಾ ಪ್ರದೇಶ ಯಾ ಮೀನುಗಾರರ ನೆಲೆಗಳನ್ನು ಗುರುತಿಸಿಲ್ಲ. ಕೇವಲ ಕಾಟಾಚಾರಕ್ಕೆ ಕೆಲವು ಚುಕ್ಕೆ ಹಾಕಿದ್ದಾರೆ ಕಾನೂನಿನ ಪ್ರಥಮ ಪ್ಯಾರಾದಲ್ಲಿ ಮೀನುಗಾರರ ನೆಲೆಗಳು, ಅವರು ಬಳಕೆಯಲ್ಲಿರುತ ಕಡಲ ತೀರ ಪ್ರದೇಶಗಳು, ಭವಿಷ್ಯದ ಮುಂದಿನ 50 ವರ್ಷದಲ್ಲಿ ಅವರ ಅಭಿವೃದ್ದಿಗೆ ಬೇಕಾಗುವ ಪ್ರದೇಶಗಳನ್ನು ಗುರುತಿಸಲು ತಿಳಿಸಿದ್ದಾರೆ ಆದರೆ ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣೆ ಪ್ರಾಧಿಕಾರ (KCZMA) ಇವುಗಳನ್ನು ಗಣನೆ ಮಾಡದೆ ರಾಜ್ಯದಲ್ಲಿ ಕಡಲ ತೀರದ ಜಿಲ್ಲೆಗಳಲ್ಲಿ ಮೀನುಗಾರರೇ ಇಲ್ಲದ ರೀತಿಯಲ್ಲಿ ನಕ್ಷೆ ಸಿದ್ಧಪಡಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಎಲ್ಲಾ ತೀರ, ನದಿ ತೀರ ದಿಂದ 50 ಮೀಟರ ಎಲ್ಲಾ ಭೂಮಿಗಳು ಬಂದರೂ ಇಲಾಖೆಗೆ ಸೇರಿದ್ದು ಎ೦ದು ಗುರುತಿಸಿದೆ. ಕೆಲವು ಕಡಲ ತೀರವನ್ನು ಪ್ರವಾಸೋಧ್ಯಮ ಇಲಾಖೆಗೆ ಮೀಸಲು ಇಟ್ಟಿದೆ ಇದರಿಂದ ಜಿಲ್ಲೆಯ ಮೀನುಗಾರರು ತಮ್ಮ ನೆಲೆಗಳನ್ನು ಮನೆ- ಮಠಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 2019 ರಲ್ಲಿ ಪ್ರಕಟಿತ ಜಿಲ್ಲೆಯ ಕರಾವಳಿ ತೀರ ವಲಯ ನಿರ್ವಹಣಾ ನಕ್ಷೆಗಳ ರಚನೆ (ಬೆಂಗಳೂರ, ಚೆನೈನಲ್ಲಿ ಕುಳಿತು) ಅತ್ಯಂತ ಕಳಪೆ ನಕ್ಷೆಗಳಾಗಿವೆ ಎಂದರೆ ಸಿ.ಆರ್. ಜೇಡ್ ಕಾನೂನಿನಲ್ಲಿ ಹೇಳಲಾದ ಪರಿಸರ ಸೂಕ್ಷ ಪ್ರದೇಶಗಳಾದ ಕಾಂಡ್ಲಾ ಪ್ರದೇಶ, ಮೀನಿನ ಸಂತಾನೂ ತ್ಪತ್ತಿ ಪ್ರದೇಶ, ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶಗಳು, ಮರಳು ದಿಬ್ಬ ಗಳ ಮೇಲೂ ಪೋರ್ಟ ಜಾಗ ಅಂತ ಗುರುತಿಸಿದ್ದಾರೆ. ಕಾರವಾರದ ಕಾಳಿನದಿಯ ಕದ್ರಾ ಹೊನ್ನಾವರದ ಶರಾವತಿ ಯ ಸರಳಗಿ ತನಕ ನದಿ ದಡಗಳು ಹಳ್ಳ ಕೊಳ್ಳಗಳನ್ನು ಬಂದರೂ ಇಲಾಖೆ ಜಾಗ ಅಂತ ಗುರುತಿಸಿದ್ದಾರೆ. ಹಾಸ್ಯವಾದ ವಿಷಯ ಎಂದರೆ ಬಂದರೂ ನೌಕೆಗಳಿಗೆ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಮಾರ್ಗದ ಸೇತುವೆಗಳನ್ನು ದಾಟಲು ಎತ್ತರ ಕಡಿಮೆಯಾಗುವದು. ಕರಾವಳಿಯ ಎಲ್ಲ ಪ್ರದೇಶಗಳನ್ನು ಬಂದರೂ ಇಲಾಖೆಗೆ ನೀಡಿ ಕರಾವಳಿ ತೀರ ವಲಯ ನಿರ್ವಹಣಾ ಪ್ರಾಧಿಕಾರವನ್ನು ಮುಚ್ಚುವ / ವಿಲಿನ ಮಾಡುವ ಉದ್ದೇಶ ಹೊಂದಿರ ಬಹುದೆಂದು ಕರಾವಳಿಗರು ಆಡಿಕೊಳ್ಳುತಿದ್ದಾರೆ. ಪಕ್ಷದ ತಳಮಟ್ಟದ ಕಾರ್ಯಕರ್ತರಾಗಿ ಬಳಕೆ ಮಾಡುವ ಮೀನುಗಾರರನ್ನು ರಾಜಕೀಯವಾಗಿ ತುಳಿಯಲು ಮೀನುಗಾರ ಸಮಾಜದ ನಾಯಕರ ಮೇಲೆ ಸುಳ್ಳು ಮೊಕದ್ದಮೆ ಹಾಕಿ ಕೇಡಿ , ರೌಡಿ ಸೀಟರ IPC 110 ಕೇಸಗಳನ್ನು ಹಾಕಿ ಇಟ್ಟಿದ್ದಾರೆ. ಪ್ರತಿ ಚುನಾವಣೆ ಸಮಯದಲ್ಲಿ ಇವರಿಂದ ಬಾಂಡ್ ಸಹಿತ ಹಿಂಬರಹ ಪಡೆಯುತ್ತಾರೆ. ಮೀನುಗಾರರು ಭಾರತೀಯರಾಗಿ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾಗವಹಿಸುವಿಕೆಯನ್ನು ಜಿಲ್ಲೆಯ ಚುನಾವಣೆ ಅಧಿಕಾರಿಗಳು ಇವರನ್ನು ತಡೆಯುತ್ತಾರೆ. ಉದಾ: ರಾಜೇಶ ಈಶ್ವರ ತಾಂಡೇಲ ಎಂಬ ಟೊಂಕಾದ ಗಣ್ಯ ಯುವ ಮೀನುಗಾರ ಮುಖಂಡನ ಮೇಲೆ ದೂರಿದ FIR ನಲ್ಲಿ ಅವನ ಹೆಸರೆ ಇಲ್ಲಾ. ಸುಳ್ಳು FIR ಸಂಖ್ಯೆಗಳನ್ನು ನೀಡಿ 110 ಆದೇಶ ಮಾಡಿ ರಾಜಕೀಯ ಎಳಿಗೆಯನ್ನು ತಡೆಯುತ್ತಿದ್ದಾರೆ.