ಯಶಸ್ವಿಯಾಗಿ ಸಂಪನ್ನಗೊಂಡ ಕೊಂಕಣಿ ಖಾರ್ವಿ

ಕರಾವಳಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡು ತಮ್ಮ ಕ್ರೀಯಾಶೀಲತೆಯಿಂದ ಕೊಂಕಣಿ ಖಾರ್ವಿ ಸಮಾಜದ

ಕರಾವಳಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡು ತಮ್ಮ ಕ್ರೀಯಾಶೀಲತೆಯಿಂದ ಕೊಂಕಣಿ ಖಾರ್ವಿ ಸಮಾಜದ ಆಸ್ಮಿತೆ,ಸಾಂಸ್ಕೃತಿಕ ಪರಂಪರೆಯ ಕಂಪನ್ನು ಪಸರಿಸುತ್ತಿರುವ ಕೊಂಕಣಿ ಖಾರ್ವಿ ವಿದ್ಯಾವೇದಿಕೆಯ 21 ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಬೆಂಗಳೂರಿನಲ್ಲಿ ತಾರೀಕು 25 12 2022 ರಂದು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಈ ಸಮಾರಂಭದ ಅಧ್ಯಕ್ಷತೆಯನ್ನು ಖಾರ್ವಿ ಆನ್ಲೈನ್ ಸಂಪಾದಕರಾದ ಕೋಟಾನ್ ಸುಧಾಕರ್ ಖಾರ್ವಿಯವರು ವಹಿಸಿದ್ದರು.ಈ ಸಂದರ್ಭದಲ್ಲಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ AIKKMS ಮತ್ತು ಕೊಂಕಣಿ ಖಾರ್ವಿ ವಿದ್ಯಾವೇದಿಕೆ ಬೆಂಗಳೂರು ಸಮಾಜದ ಎರಡು ಕಣ್ಣುಗಳಿದ್ದಂತೆ. ಸಮಾಜಕ್ಕೆ ಸಂಬಂಧಿಸಿದಂತೆ AIKKMS ಕೈಗೊಳ್ಳುವ ಪ್ರತಿಯೊಂದು ಚಟುವಟಿಕೆಗಳಲ್ಲಿ ಕೊಂಕಣಿ ಖಾರ್ವಿ ವಿದ್ಯಾವೇದಿಕೆ, ಆರ್ಥಿಕವಾಗಿ ಮತ್ತು ನೈತಿಕವಾಗಿ ಸರ್ವರೀತಿಯಿಂದಲೂ ಸಹಕಾರ ನೀಡುತ್ತಾ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದು ವಿದ್ಯಾವೇದಿಕೆಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಮಾರಂಭದಲ್ಲಿ ಸುಮಾರು 105 ಜನ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪ್ರಕಾಶ ಮೇಸ್ತಾ ಸ್ಥಾಪಕರು ನ್ಯೂಯಜ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು,ಶ್ರೀ ಶಿವರಾಜ್ ಮೇಸ್ತಾ ಅಧ್ಯಕ್ಷರು ಹೊನ್ನಾವರ ಪಟ್ಟಣ ಪಂಚಾಯತ್ ಹಾಗೂ ಶ್ರೀಯುತ ಮಡಿಕಲ್ ಸುರೇಶ್ ಖಾರ್ವಿ ಅಧ್ಯಕ್ಷರು ಶ್ರೀ ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿ ಇವರು ಭಾಗವಹಿಸಿ ತಮ್ಮ ಹಿತನುಡಿಗಳನ್ನು ಆಡಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಡು ಸಂಗೀತ, ನೃತ್ಯ ಪ್ರದರ್ಶನಗಳು ನಡೆಯಿತು ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಸುರೇಶ್ ಕುಮಾರ್ ಗಂಗೊಳ್ಳಿ ಮತ್ತು ಪ್ರಭಾಕರ ಗಂಗೊಳ್ಳಿಯವರು ನಡೆಸಿಕೊಟ್ಟರು. ಶ್ರೀ ಸುರೇಶ್ ಖಾರ್ವಿ ಕುಂದಾಪುರ ಅಧ್ಯಕ್ಷರು ಕೊಂಕಣಿ ಖಾರ್ವಿ ವಿದ್ಯಾವೇದಿಕೆ ಇವರು ಸ್ವಾಗತ ಭಾಷಣ ಮಾಡಿದರು, ಹರೀಶ್ ನಾಯ್ಕ್ ವರದಿ ವಾಚನ ಮಾಡಿದರು ವಿದ್ಯಾರ್ಥಿ ವೇತನವ ವಿತರಣಾ ಕಾರ್ಯಕ್ರಮ ಮತ್ತು ನಿರೂಪಣೆಯನ್ನು ರವಿರಾಮ ಖಾರ್ವಿ ಮತ್ತು ಸತೀಶ್ ಖಾರ್ವಿ ನಡೆಸಿಕೊಟ್ಟರು. ಕಾರ್ಯಕ್ರಮ ನಿರೂಪಣೆಯನ್ನು ಜ್ಯೋತಿ ಖಾರ್ವಿಯವರು ಸಾಂಗವಾಗಿ ನಡೆಸಿಕೊಟ್ಟರು ಸಾರ್ಥ್ಯಕದ ಕಾರ್ಯಕ್ರಮ ಹೃದಯಂಗಮವಾಗಿ ಸಂಪನ್ನಗೊಂಡಿತ್ತು.